L
A D I N G . .
Home / Portfolio / ARS Engineering Coconut Trimming Machine

ARS Engineering Coconut Trimming Machine

ಅರೆ ಸ್ವಯಂಚಾಲಿತ ಎಳನೀರು ಕತ್ತರಿಸುವ ಯಂತ್ರದ ಉತ್ಪಾದಕ ಮತ್ತು ಪೂರೈಕೆದಾರರಲ್ಲಿ ARS ಇಂಜಿನಿಯರಿಂಗ್ ಸಂಸ್ಥೆಯೂ ಒಂದಾಗಿದೆ.

ಈ ಯಂತ್ರವು ಎಳನೀರಿನ ಕಾಯಿಗಳನ್ನು ಸುತ್ತಲೂ ಡೈಮಂಡ್ ಆಕಾರದಲ್ಲಿ, ತಳಭಾಗ ಚಪ್ಪಟೆಯಾಗಿ ಕತ್ತರಿಸುತ್ತದೆ. ಜೊತೆಗೆ ಎಳನೀರಿನ ಕಾಯಿಯ ಮೇಲ್ಭಾಗವನ್ನು ಗೋಳಾಕಾರದಲ್ಲಿ ಕತ್ತರಿಸುವುದರಿಂದ ಎಳನೀರಿನ ಬಳಕೆ ಸುಲಭವಾಗಿದೆ.

ಈ ಕ್ಷೇತ್ರದಲ್ಲಿ ಆಳವಾದ ಜ್ಞಾನ ಮತ್ತು ಅನುಭವವನ್ನು ಹೊಂದಿರುವ ನಮ್ಮ ಸಂಸ್ಥೆ ಅತ್ಯುತ್ತಮ ಗುಣಮಟ್ಟದ ಯಂತ್ರಗಳ ಸಂಗ್ರಹವನ್ನು ಹೊಂದಿದೆ. ಈ ಯಂತ್ರಗಳನ್ನು ಗುಣಮಟ್ಟದ ಕಚ್ಛಾ ವಸ್ತುಗಳಿಂದ ತಯಾರಿಸಲಾಗಿದೆ. ಇದರ ಸ್ಥಾಪನೆ ಮತ್ತು ನಿರ್ವಹಣೆ ಸುಲಭವಾಗಿದ್ದು ಬಳಕೆದಾರ ಸ್ನೇಹಿ ಯಂತ್ರವಾಗಿದೆ.

ಎಳನೀರು ಕತ್ತರಿಸುವ ಯಂತ್ರವು ವ್ಯಾಪಾರಿಗಳಿಗೆ, ನವ ಉದ್ಯಮಿಗಳಿಗೆ ಬಳಕೆದಾರ ಸ್ನೇಹಿಯಾಗಿದ್ದು ವಿದೇಶಗಳಿಗೂ ರಫ್ತಾಗುತ್ತಿದೆ.

ಯಂತ್ರದ ವೈಶಿಷ್ಟ್ಯಗಳು

* ಸ್ವಯಂಚಾಲಿತ ಕಾರ್ಯಾಚರಣೆ
* ವಿದ್ಯುತ್ಚಾಲಿತ ಯಂತ್ರ
* ದೃಡವಾದ ವಿನ್ಯಾಸ
* ಸವೆತ ಪ್ರತಿರೋಧಕ
* ಕಡಿಮೆ ಮಾನವ ಶ್ರಮದ ಬಳಕೆ
* ಬಳಕೆದಾರ ಸ್ನೇಹಿ ಮತ್ತು ಸುರಕ್ಷಿತ
* ಗಂಟೆಗೆ 100-120 ಎಳನೀರಿನ ಕಾಯಿಯ ಕತ್ತರಿಸುವಿಕೆ
* ಗ್ರಾಹಕರಿಗೆ ಆಕರ್ಷಕವಾಗಿ ಕಾಣುವಂತೆ ಎಳನೀರಿನ ಕಾಯಿಯ ವಿನ್ಯಾಸ.

ಮಾದರಿ: ARS GC-3

ಅಳತೆ : (L × W × H) : 1.10 ×  0.53 × 1.75m

ವಿದ್ಯುತ್ : 240 ವೋಲ್ಟ್, ಸಿಂಗಲ್ ಫೇಸ್, 2HP ಮೋಟಾರ್.

    • Products Kannada
ARS Engineering Coconut Trimming Machine
× How can I help you?