ARS Engineering Coconut Dehusking Machine
ಸ್ವಯಂಚಾಲಿತ ತೆಂಗಿನಕಾಯಿ ಸಿಪ್ಪೆ ಸುಲಿಯುವ ಯಂತ್ರದ ಉತ್ಪಾದಕ ಮತ್ತು ಪೂರೈಕೆದಾರರಲ್ಲಿ ARS ಇಂಜಿನಿಯರಿಂಗ್ ಸಂಸ್ಥೆಯೂ ಒಂದಾಗಿದೆ.
ತೆಂಗಿನಕಾಯಿ ಸಿಪ್ಪೆ ಸುಲಿಯುವ ಪ್ರಕ್ರಿಯೆಯು ತುಂಬಾ ಶ್ರಮದಾಯಕ ಕೆಲಸವಾಗಿದೆ. ಪಾರಂಪರಿಕವಾಗಿ ಪೂರ್ತಿ ಸುಲಿಯುವ ಪ್ರಕ್ರಿಯೆಯು ಮಾನವ ಶ್ರಮದ ಮೂಲಕ ನಡೆಯುತ್ತದೆ. ಜೊತೆಗೆ ಇದು ಹೆಚ್ಚು ಮಾನವ ಚಾತುರ್ಯ, ಕೌಶಲ್ಯ, ತರಬೇತಿ ಬೇಡುವ ಕೆಲಸವಾಗಿದೆ.
ARS ಇಂಜಿನಿಯರಿಂಗ್ ಸಂಸ್ಥೆಯು ಸ್ವಯಂಚಾಲಿತ ತೆಂಗಿನಕಾಯಿ ಸಿಪ್ಪೆ ಸುಲಿಯುವ ಯಂತ್ರದ ತಯಾರಿಕೆ, ಮಾರಾಟ ಮತ್ತು ರಫ್ತುದಾರರು. ಪ್ರಮುಖವಾಗಿ 7.5HP ಮೋಟಾರು ಹೊಂದಿರುವ ಯಂತ್ರವು ಗಂಟೆಗೆ 1500-1800 ರಷ್ಟು ತೆಂಗಿನಕಾಯಿಗಳ ಸಿಪ್ಪೆ ಸುಲಿಯುವ ಸಾಮರ್ಥ್ಯ ಹೊಂದಿದೆ.
ಈ ಯಂತ್ರವನ್ನು ಅತ್ಯುತ್ತಮ ಕಚ್ಛಾ ವಸ್ತುಗಳಿಂದ ತಯಾರಿಸಲಾಗಿದೆ.
ಈ ಯಂತ್ರ ಅನೇಕ ವರ್ಷಗಳ ಬಾಳಿಕೆ ಬರುವುದಲ್ಲದೆ ಅಳತೆಗೆ ಅನುಗುಣವಾಗಿ ನಿರ್ಮಿಸಲ್ಪಟ್ಟಿದೆ.
ಯಂತ್ರದ ವಿನ್ಯಾಸ ಕಡಿಮೆ ಸಮಯದಲ್ಲಿ ವೇಗವಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ.
ಈ ಯಂತ್ರವು ಕೃಷಿಕರಿಗೆ, ವ್ಯಾಪಾರಿಗಳಿಗೆ, ಸಂಘ ಸಂಸ್ಥೆಗಳಿಗೆ, ತೆಂಗಿನಕಾಯಿ ಸಂಸ್ಕರಣಾ ಘಟಕಗಳಿಗೆ, ಹೀಗೆ ಎಲ್ಲೆಲ್ಲಿ ಹೆಚ್ಚಿನ ಕಾಯಿಗಳನ್ನು ಸುಲಿಯುವ ಅವಶ್ಯಕತೆ ಇದೆಯೋ, ಅವರಿಗೆಲ್ಲಾ ಕಡಿಮೆ ಸಮಯದಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಲು ಉಪಕಾರಿಯಾಗಿದೆ.
ಯಂತ್ರದ ವೈಶಿಷ್ಟ್ಯಗಳು
* ಸ್ವಯಂಚಾಲಿತ ಕಾರ್ಯಾಚರಣೆ
* ವಿದ್ಯುತ್ಚಾಲಿತ ಯಂತ್ರ
* ದೃಡವಾದ ವಿನ್ಯಾಸ
* ಸವೆತ ಪ್ರತಿರೋಧಕ
* ಕಡಿಮೆ ಮಾನವ ಶ್ರಮದ ಬಳಕೆ
* ಬಳಕೆದಾರ ಸ್ನೇಹಿ ಮತ್ತು ಸುರಕ್ಷಿತ
* ಚಿಕ್ಕದಾದ ವಿನ್ಯಾಸ ಸಾಗಾಟಕ್ಕೆ ಅನುಕೂಲಕರ
* ವಿವಿಧ ಆಕಾರದ ಕಾಯಿಗಳನ್ನು ಸುಲಿಯುವ ಸಾಮರ್ಥ್ಯ.

Specifications: ARS DS-1., ARS DS-2.,
Motor Rating : 2 HP & 7.5 HP.
