ನಮ್ಮ ಬಗ್ಗೆ

...

2006 ರಲ್ಲಿ ಸಂಸ್ಥಾಪಿಸಲ್ಪಟ್ಟ ARS ಇಂಜಿನಿಯರಿಂಗ್ ಅತ್ಯುತ್ತಮ ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ಯಶಸ್ವಿಯಾಗಿ ಚಾಲನೆಯಲ್ಲಿದೆ. ನಾವು “ತೆಂಗಿನಕಾಯಿ ಸಿಪ್ಪೆ ಸುಲಿಯುವ ಯಂತ್ರಗಳು,ಎಳನೀರು ಕತ್ತರಿಸುವ ಮತ್ತು ರಬ್ಬರ್ ಬ್ಯಾಂಡ್ ಉತ್ಪಾದನೆ ಯಂತ್ರಗಳ ತಯಾರಕರು ಮತ್ತು ರಫ್ತುದಾರರು.

ನಾವು ಸ್ವಯಂಚಾಲಿತ ತೆಂಗಿನಕಾಯಿ ಡೀಹಸ್ಕಿಂಗ್ ಯಂತ್ರ, ಅರೆ ಸ್ವಯಂಚಾಲಿತ ಎಳನೀರು ಟ್ರಿಮ್ಮಿಂಗ್ ಯಂತ್ರ, ರಬ್ಬರ್ ಬ್ಯಾಂಡ್ ಕಟಿಂಗ್ ಮೆಶಿನ್, ರಬ್ಬರ್ ಬ್ಯಾಂಡ್ ಡಿಪ್ಪಿಂಗ್ ಯಂತ್ರ, ರಬ್ಬರ್ ಬ್ಯಾಂಡ್ ಡ್ರೈಯರ್ / ಏಲಕ್ಕಿ ಡ್ರೈಯರ್ ಮೆಷಿನ್, ರಬ್ಬರ್ ಬ್ಯಾಂಡ್ ರಾಸಾಯನಿಕ ಮಿಶ್ರಣ ಯಂತ್ರ, ರಬ್ಬರ್ ಬ್ಯಾಂಡ್ ಸ್ವಚ್ಛಗೊಳಿಸುವ ಯಂತ್ರ, ರಿಬ್ಬನ್ ಬ್ಲೆಂಡರ್ ಯಂತ್ರ ಮತ್ತು ಮೋಲ್ಡ್ ಸ್ಟಿಕ್ಸ್ ಮುಂತಾದ ಯಂತ್ರಗಳನ್ನು ತಯಾರಿಸಿ ಮಾರಾಟ ಮಾಡುತ್ತೇವೆ.

ARS ಇಂಜಿನಿಯರಿಂಗ್ ಉತ್ಪನ್ನಗಳನ್ನು ಅತ್ಯಂತ ಕಡಿಮೆ ಬೆಲೆಗೆ ಪರಿಣಾಮಕಾರಿ ರೀತಿಯಲ್ಲಿ ನೀಡುತ್ತದೆ ಮತ್ತು ಗ್ರಾಹಕರಿಗೆ ಉತ್ತಮ ಗುಣಮಟ್ಟವನ್ನು ನೀಡುತ್ತದೆ. ನಮ್ಮ ಗ್ರಾಹಕರೊಂದಿಗೆ ದೀರ್ಘಾವಧಿಯ ವ್ಯವಹಾರ ಸಂಬಂಧಗಳನ್ನು ಪರಿಗಣಿಸಿ, ನಮ್ಮ ಉದ್ಯೋಗಿಗಳಿಗೆ ನಿಯತಕಾಲಿಕವಾಗಿ ನಾವು ಅತ್ಯುತ್ತಮ ತರಬೇತಿ ನೀಡುತ್ತೇವೆ ಮತ್ತು ಆಧುನಿಕ ಪ್ರವೃತ್ತಿಯೊಂದಿಗೆ ಉತ್ಪಾದನಾ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತೇವೆ.

ARS ಇಂಜಿನಿಯರಿಂಗ್ ಸಿಕ್ಸ್ ಸಿಗ್ಮಾ ತತ್ವಗಳನ್ನು ಅನುಸರಿಸುತ್ತದೆ ಮತ್ತು ಗುಣಮಟ್ಟವನ್ನು ಸುಧಾರಿಸಲು LEAN ಪರಿಕರಗಳನ್ನು ಜಾರಿಗೊಳಿಸುತ್ತದೆ.

ಸಮಯಕ್ಕೆ ತಕ್ಕಂತೆ ಮಾರಾಟ ಮತ್ತು ಮಾರಾಟದ ನಂತರ ಸಮಯೋಚಿತ ಸೇವೆ ನಮ್ಮ ವೈಶಿಷ್ಟ್ಯ. ಅಸ್ತಿತ್ವದಲ್ಲಿರುವ ಗ್ರಾಹಕರಿಂದ ಪುನರಾವರ್ತಿತ ಬೇಡಿಕೆಗಳು ಬರುವುದರೊಂದಿಗೆ ನಮ್ಮ ಗ್ರಾಹಕ ಬಳಗ ಬೆಳವಣಿಗೆ ಹೊಂದುತ್ತಿದೆ.